ಮಂಗಳವಾರ, ಜುಲೈ 29, 2014

ಸಾಮ್ಯತೆಯ ಲಾರ್ಡ್ಸ್​ ಟೆಸ್ಟ್

ಲಾರ್ಡ್ಸ್​ನಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಗೆದ್ದಿದ್ದು ಹಲವು ರೋಚಕಗಳಿಗೆ ಕಾರಣವಾಗಿದೆ. ಕಪಿಲ್​ ದೇವ್​ ನಂತರ ಇಂತಹ ಸಾಹಸ ಮಾಡಿದ್ದು ಮಹಿ. ಈ ಮೂಲಕ ಹಲವು ಅಚ್ಚರಿಯ ಘಟನೆಗಳಿಗೆ ಕಾರಣರಾಗಿದ್ದಾರೆ. ಈ ದಾಖಲೆಯಲ್ಲಿ ಟೀಮ್​ನ ಅನೇಕ ಸದಸ್ಯರು ಪಾತ್ರರಾಗಿದ್ದು. ಹಲವು ರೀತಿಯಲ್ಲಿ ಈ ಗೆಲುವು ಭಾರತೀಯರಿಗೆ ರೋಮಾಂಚನವುಂಟು ಮಾಡುವಲ್ಲಿ ಯಶಸ್ವಿಯಾಗಿದೆ....

ಭಾರತ ತಂಡ ಐತಿಹಾಸಿಕ ಲಾರ್ಡ್ಸ್​ ಟೆಸ್ಟ್​ ಗೆದ್ದಿರುವುದು ಈಗ ಹೊಸ ಸಂತಸಕ್ಕೆ ಕಾರಣವಾಗಿದೆ. ಅದು ಗೆಲುವಿನ ಖುಷಿಯಿಂದಷ್ಟೆ ಅಲ್ಲ. ಎರಡು ಪಂದ್ಯಗಳಿಗಿರುವ ಸಾಮ್ಯತೆಯಿಂದಾಗಿ. 1986ರ ಪಂದ್ಯಕ್ಕೂ 2014ರ ಪಂದ್ಯಕ್ಕೂ ಅನೇಕ ಸಾಮ್ಯತೆಗಳನ್ನು ನಾವು ಕಾಣಬಹುದು. ಹೀಗಾಗಿ ಈ ಪಂದ್ಯ ಕಪಿಲ್​ ಡೆವಿಲ್ಸ್ ಮತ್ತು ಧೋನಿ ಬ್ರಿಗೇಡ್​ಗೆ ವಿಶೇಷ ಟೆಸ್ಟ್​ ಆಗಿದೆ.

 ವಿಶ್ವಕಪ್​ ಗೆದ್ದ ನಾಯಕರು ಕಪಿಲ್​-ಧೋನಿ

1986 ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಗೆದ್ದ ನಾಯಕ ಕಪಿಲ್​ದೇವ್​. ವಿಶೇಷ ಎಂದರೆ ಕಪಿಲ್​ ಭಾರತಕ್ಕೆ ಮೊದಲ ವಿಶ್ವಕಪ್​ ಗೆದ್ದ ನಾಯಕ. 2014ರಲ್ಲಿ ಮಹಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ನಾಯಕ ಎಂದೆನಿಸಿಕೊಂಡ್ರು ವಿಶೇಷ ಎಂದರೆ ಧೋನಿ ಕೂಡ ವಿಶ್ವಕಪ್​ ಗೆದ್ದಿರುವ ಭಾರತದ ಎರಡನೇ ನಾಯಕ. ಸೋಜಿಗ ಅಂದರೆ ಇಬ್ಬರು ವಿಶ್ವಕಪ್​ ಗೆದ್ದ ಮೂರು ವರ್ಷದ ನಂತರ ಲಾರ್ಡ್ಸ್​ನಲ್ಲಿ ಟೆಸ್ಟ್​ ಜಯದ ರುಚಿ ಅನುಭವಿಸಿದ್ರು.

 ಮೊದಲ ಇನ್ನಿಂಗ್ಸ್​ 9 ರನ್​ ಗಳಿಸಿದ ಬಿನ್ನಿ

ಈ ಟೆಸ್ಟ್​ನಲ್ಲಿ ಇನ್ನೊಂದು ಸಾಮ್ಯತೆಯಂದರೆ, ರೋಜರ್​ ಬಿನ್ನಿ-ಸ್ಟುವರ್ಟ್​ ಬಿನ್ನಿ ಅಪ್ಪ ಮಕ್ಕಳ ಆಟ. 1986ರಲ್ಲಿ ಲಾರ್ಡ್ಸ್​ನಲ್ಲಿ ಚೊಚ್ಚಲ ಟೆಸ್ಟ್​ ಆಡಿದ ರೋಜರ್​ ಬಿನ್ನಿ, ಮೊದಲ ಇನ್ನಿಂಗ್ಸ್​​​ನಲ್ಲಿ 19 ಬಾಲ್​ಗೆ 9 ರನ್​ಗಳಿಸಿದ್ರು. ಲಾರ್ಡ್ಸ್​ನಲ್ಲಿ ಮೊದಲ ಪಂದ್ಯವಾಡಿದ ಬಿನ್ನಿ ಕೂಡ ಪ್ರಥಮ ಇನ್ನಿಂಗ್ಸ್​ನಲ್ಲಿ 19 ಬಾಲ್​ಗೆ 9 ರನ್​ಗಳಿಸುವ ಮೂಲಕ ಅಚ್ಚರಿಗೆ ಕಾರಣರಾದ್ರು. ಅಪ್ಪನ ಹಾದಿಯಲ್ಲೇ ಮಗ ಸಾಗಿದ್ರು.

ಲಾರ್ಡ್ಸ್​ನಲ್ಲಿ ಮುಂಬೈ ಆಟಗಾರರ ಶತಕ

ಲಾರ್ಡ್ಸ್​ನಲ್ಲಿ ನಡೆದ  1986ರ ಟೆಸ್ಟ್​ ಹಾಗೂ 2014ರ ಟೆಸ್ಟ್​ನಲ್ಲಿ  ಶತಕ ದಾಖಲಿಸಿದ ಇಬ್ಬರು ಆಟಗಾರರು ಮುಂಬೈನವರು. 86ರಲ್ಲಿ ದಿಲೀಪ್​ ವೆಂಗ್​​ಸರ್ಕಾರ್​ ಶತಕ ದಾಖಲಿಸಿದ್ರೆ, 2014ರಲ್ಲಿ ಅಜಿಂಕ್ಯ ರಹಾನೆ ಶತಕ ದಾಖಲಿಸಿದ್ರು. ವಿಶೇಷವೆಂದ್ರೆ ಎರಡು ಶತಕ ಮೊದಲ ಇನ್ನಿಂಗ್ಸ್​ನಲ್ಲಿ ದಾಖಲಾಗಿದ್ವು.

5 ವಿಕೆಟ್​ ಪಡೆದ ‘ಶರ್ಮಾ’

ಅಷ್ಟೇ ಅಲ್ಲ 2014ರಲ್ಲಿ  ಇಶಾಂತ್​ ಶರ್ಮಾ ಐದು ಪ್ಲಸ್​ ವಿಕೆಟ್​ ಪಡೆದು ಭಾರತದ ಜಯದ ರೂವಾರಿಯಾದ್ರು. 86ರಲ್ಲಿ ಚೇತನ್​ ಶರ್ಮಾ ಐದು ವಿಕೆಟ್​ ಉರುಳಿಸಿ  ಇಂಗ್ಲೆಂಡ್​ ಗೆಲುವಿಗೆ ಅಡ್ಡಿಯಾಗಿದ್ರು. ವಿಶೇಷ ಎಂದರೆ ಇಬ್ಬರ  ಸರ್​ ನೇಮ್​  ಶರ್ಮಾ.

86ರ ಫಿಫಾ ಫೈನಲ್​ನಲ್ಲಿ ಸೆಣಸಿದ್ದ ಜರ್ಮನಿ-ಅರ್ಜೆಂಟೀನಾ

ಎಲ್ಲದಕ್ಕಿಂತ ಸೋಜಿಗದ ಸಂಗತಿಯೆಂದರೆ, 1986ರಲ್ಲಿ ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಸೆಣಸಿದ್ದು ಇದೇ ಜರ್ಮನಿ-ಅರ್ಜೆಂಟೀನಾ, ಈ ಸಲ ಫಿಫಾ ಫೈನಲ್​ನಲ್ಲಿ ಸೆಣಸಿದ ಟೀಮ್​ ಕೂಡ ಇವೇ ಆಗಿದ್ವು. ವಿಶೇಷ ಎಂದರೆ ಎರಡು ಸಲ ಭಾರತ ಲಾರ್ಡ್ಸ್​ ಟೆಸ್ಟ್​ ಗೆಲ್ಲುವ ಮೊದಲೇ ಫಿಫಾ ವಿಶ್ವಕಪ್​ ಮುಗಿದು ಹೋಗಿತ್ತು.

ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಭಾರತದ ಗೆಲುವು ಅದ್ಭುತ ಎಂದೆನಿಸಲು ಕೇವಲ ಗೆಲುವೊಂದೇ ಕಾರಣವಲ್ಲ. ಗೆದ್ದ ಸಮಯದಲ್ಲಿ ಅನೇಕ ಸಂಗತಿ, ಸನ್ನಿವೇಶಗಳು ಒಂದೇ ರೀತಿಯಾಗಿದ್ವು. ಕಾಲವು ಕೂಡ ಭಾರತದ ಜೊತೆಗಿತ್ತು ಎಂಬುವುದು ಅಷ್ಟೇ ಸತ್ಯ.

ರವಿ.ಎಸ್​, ಸ್ಪೋರ್ಟ್ಸ್​ ಬ್ಯೂರೋ ಸುವರ್ಣ ನ್ಯೂಸ್​

ಮಂಗಳವಾರ, ಜುಲೈ 22, 2014

ವಿಶ್ವದ ಎಲ್ಲ ಕ್ರಿಕೆಟಿಗರು ಪಿಚ್​ ಎಂದರೆ ಗರ್ಭಗುಡಿಯಂತೆ ಪೂಜಿಸುತ್ತಾರೆ. ಅನೇಕ ಆಟಗಾರರು ಬ್ಯಾಟಿಂಗ್​ ಮುನ್ನ ಪಿಚ್​ನ ನಮಸ್ಕರಿಸುತ್ತಾರೆ. ಯಶಸ್ಸಿನ ನಂತರ ಪಿಚ್​ನ ಸ್ಪರ್ಶಿಸಿ ಥ್ಯಾಂಕ್ಸ್​ ಹೇಳುವ ಪರಿಪಾಟ ಎಲ್ಲೆಡೆ ಕಾಣಬಹುದು. ಆದರೆ ಇಂಗ್ಲೆಂಡ್​ ಆಟಗಾರರು ಮಾಡಿದ ಒಂದು ತಪ್ಪು ಅವರಿಗೆ ಮಾರಕವಾಗಿದೆ. ಪಿಚ್​ಗೆ ಅವಮಾನಿಸಿದ ಇಂಗ್ಲೆಂಡ್​ ಲಾರ್ಡ್ಸ್​ ಟೆಸ್ಟ್​ ಸೋತಿದೆ.......

ಕಳೆದ  9 ಟೆಸ್ಟ್​ಗಳಿಗಿಂತ ಮುಂಚೆ ಇಂಗ್ಲೆಂಡ್​ ತಂಡ ವಿಶ್ವ ಟೆಸ್ಟ್​ ಱಂಕಿಂಗ್​ನಲ್ಲಿ ನಂಬರ್​ ವನ್​ ಸ್ಥಾನದಲ್ಲಿತ್ತು. ಯಾವಾಗ ಇಂಗ್ಲೆಂಡ್​ ಆಟಗಾರರು ದಿ ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೋ ಅಲ್ಲಿಂದ ಅವರ ಹಣಬರಹವೇ ಬದಲಾಗಿ ಹೋಯ್ತು. ಅಗ್ರಸ್ಥಾನದಲ್ಲಿದ್ದ ತಂಡ, ಆ ಘಟನೆ ನಂತರ ಒಂದು ಜಯ ದಾಖಲಿಸಿಲ್ಲ. ಈಗ್ಲೂ ಗೆಲುವು ಎಂಬುವುದು ಆಂಗ್ಲರಿಗೆ ಗಗನ ಕುಸುಮವಾಗಿದೆ.

 ವಿಶ್ವದ ಯಾವುದೇ ಶ್ರೇಷ್ಠ ಆಟಗಾರನಿರಲಿ, ಅವರಿಗೆ ಕೋಚ್ ಕಲಿಸುವ ಮೊದಲ ಪಾಠ, ಪಿಚ್​ನ ಗೌರವಿಸುವುದು. ಇಂತಹ ವಿಷಯದಲ್ಲಿ ಏಷ್ಯಾ ಉಪಮಹಾದ್ವೀಪದ ಎಲ್ಲ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರು ಪಿಚ್​ನ ದೇವರಂತೆ ಪೂಜಿಸುತ್ತಾರೆ. ಭಾರತೀಯರು, ಲಂಕನ್ನರು, ಆಡುವ ಮುಂಚೆ ಪಿಚ್​ನ ನಮಸ್ಕರಿಸಿದ್ರೆ, ಬಾಂಗ್ಲಾ ಮತ್ತು ಪಾಕ್​ ಆಟಗಾರರು ಪಿಚ್​ನಲ್ಲಿ ನಮಾಜ್​ ಬಿದ್ದು ಮುತ್ತಿಕ್ಕಿ ಖುಷಿ ಪಡ್ತಾರೆ.

 ಸನತ್​ ಜಯಸೂರ್ಯ, ರಾಹುಲ್​ ದ್ರಾವಿಡ್​, ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ಶೇನ್​ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್​ ಎಲ್ಲ ಆಟಗಾರರು ಪಿಚ್​ನ ದೇವರಂತೆ ಪೂಜಿಸಿದವರು. ಪಾಕ್​ನ ಆಟಗಾರರು ಇದಕ್ಕೆ ಹೊರತಾಗಿಲ್ಲ. ವಿದೇಶಿ ಆಟಗಾರರು ಕೂಡ ಅಷ್ಟೇ ಪ್ರತಿ ಯಶಸ್ಸಿನ ನಂತರ ಪಿಚ್​ಗೆ ಅವರದೇಯಾದ ರೀತಿಯಲ್ಲಿ ಒಂದು ಥ್ಯಾಂಕ್ಸ್​ ಹೇಳುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಅದು ಆಟಗಾರರು ಪಿಚ್​ಗೆ ತೂರುವ ಗೌರವ. ಇದು  ಸಭ್ಯರ ಆಟದ ಸಭ್ಯತೆ ಕೂಡ ಹೌದು.

 ಸಚಿನ್​ ತಮ್ಮ ವಿದಾಯದ ಟೆಸ್ಟ್​ನ ಆರಂಭದಲ್ಲಿ ಪಿಚ್​ ಮುಟ್ಟಿ ನಮಸ್ಕರಿಸಿದ್ರು. ಭಾರತ ಗೆದ್ದ ಕೂಡಲೇ ಅದೇ ಪಿಚ್​ನಲ್ಲಿ ಅಡ್ಡ ಬಿದ್ದು ನಮಸ್ಕರಿಸಿದ್ರು. ನಾನು ಈ ಪರಿ ಬೆಳೆಯುವುದಕ್ಕೆ ಕಾರಣ ಈ ಪಿಚ್​ಗಳು. ಪಿಚ್ ನನ್ನ ಮೇಲೆ ಹೆಚ್ಚು ಹಾರೈಸಿದವು, ಕೃಪೆ ತೋರಿದ್ವು. ಹಾಗಾಗಿ ನಾನು ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ಸಹಕಾರಿ ಆಯ್ತು. ಎನ್ನುವ ಮೂಲಕ ಪಿಚ್​ಗಳ ಬಗ್ಗೆ ಅವರಿಗಿರುವ ಗೌರವವನ್ನು ಹೊರಹಾಕಿದ್ರು.

 2013ರ ತವರಿನಲ್ಲಿ ನಡೆದ ಆ್ಯಶಸ್​ ಸರಣಿಯನ್ನು ಇಂಗ್ಲೆಂಡ್​  3-0ಯಿಂದ ಗೆದ್ದು ಕೊಳ್ತು. ಆಂಗ್ಲರು ಓವಲ್​ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ರು. ಟೆಸ್ಟ್​​ನ ನಂಬರ್​ ವನ್​ ತಂಡವಾಗಿ ಮೆರೆದ್ರು. ಅದೇ ಹುಮ್ಮಸ್ಸಿನಲ್ಲಿ ಆಟಗಾರರು ಓವಲ್​ ಪಿಚ್​ನಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಂಭ್ರಮಿಸಿದ್ರು. ಅದೇ ಕೊನೆ ಆದಾದ ನಂತರ ಇಂಗ್ಲೆಂಡ್​ ತಂಡ ಇದುವರೆಗೂ ಒಂದು ಟೆಸ್ಟ್​ ಗೆಲಲ್ಲು ಸಾಧ್ಯವಾಗಿಲ್ಲ.

 ಓವಲ್​ ಘಟನೆಯ ನಂತರ ಇಂಗ್ಲೆಂಡ್​ ಪ್ರದರ್ಶನ ತುಂಬಾ ಕೆಟ್ಟದಾಗಿದೆ. ಆಡಿದ 9 ಟೆಸ್ಟ್​ನಲ್ಲಿ ಆಂಗ್ಲರು ಒಂದರಲ್ಲೂ ಗೆದ್ದಿಲ್ಲ. ಏಳರಲ್ಲಿ ಸೋತಿದ್ದು, 2 ಡ್ರಾ ಮಾಡಿಕೊಂಡಿದೆ.

ಕಳೆದ ವರ್ಷ ಟೆಸ್ಟ್​ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್,​ ಇಂದು ಐದನೇ ಸ್ಥಾನ್ಕಕೆ ಕುಸಿದಿದೆ. ಇದು ಓವಲ್​ ಪಿಚ್​ನ ಶಾಪ ಅನ್ನೋದು ಕೆಲವರ ವಾದ. ಆದರೆ ಒಂದಂತೂ ಸತ್ಯ ಯಾರು ಪಿಚ್​ನ ಗೌರವಿಸುವುದಿಲ್ಲವೋ ಅವರಿಗೆ ಶ್ರೇಯ ದೊರೆಯುವುದಿಲ್ಲ. ಪಿಚ್​ ಒಲುಮೆಯಿಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂಬ ಮಾತು ಇಂಗ್ಲೆಂಡ್​ನ ಸದ್ಯದ ಪರಿಸ್ಥಿತಿಯಿಂದ ತಿಳಿಯುತ್ತೆ. ಇದು ಲಾಜಿಕ್ಕೋ, ಮ್ಯಾಜಿಕ್ಕೋ ಗೊತ್ತಿಲ್ಲ. ಆದರೆ ಆಂಗ್ಲರಿಗೆ ಮಾತ್ರ ಆಘಾತ ಆಗುವಂತ ಶಾಪ ಇದಾಗಿದೆ.

ರವಿ.ಎಸ್​

ಆಂಗ್ಲರಿಗೆ ದೆವ್ವದ ಕಾಟ

ಇಂಗ್ಲೆಂಡ್​ ಆಟಗಾರರಿಗೆ ದೆವ್ವದ ಕಾಟ ಶುರುವಾಗಿದೆ. ವಿಶ್ವವಿಖ್ಯಾತ ಹೊಟೇಲ್​ನಲ್ಲಿ ಆಂಗ್ಲ ಆಟಗಾರರು ದೇವ್ವಕ್ಕೆ ಹೆದರಿ ಹೊಟೇಲ್​ ಬದಲಿಸುವಂತೆ ಕೋರಿದ್ದಾರೆ. ಇಂಗ್ಲೆಂಡ್​ ಕ್ರಿಕೆಟರ್ಸ್​ ಪತ್ನಿಯರು, ಪ್ರೇಯಸಿಯರು ಭಯ ಬಿದಿದ್ದು, ಐತಿಹಾಸಿಕ ಹೊಟೇಲ್​ ಈಗ ವಿವಾದಕ್ಕೆ ಕಾರಣವಾಗಿದೆ...

ಲಂಡನ್​ ಅತ್ಯಂತ ಪುರಾತನ ಪಂಚತಾರ ಹೊಟೇಲ್​ಗಳಲ್ಲೊಂದು ಲ್ಯಾಂಗ್​ಹ್ಯಾಮ್​ ಹೊಟೇಲ್​. 1865ರಲ್ಲಿ ಸ್ಥಾಪನೆಯಾಗಿರುವ ಈ ಹೊಟೇಲ್​​, 150 ವರ್ಷಗಳ ಇತಿಹಾಸವೊಂದಿದೆ. ಲಂಡನ್​​ ಪ್ರತಿಷ್ಠಿತ ಪಂಚತಾರ ಹೊಟೇಲ್​ಗಳಲ್ಲೊಂದು, ಆದರೆ ಸದ್ಯ ಹೊಟೇಲ್​ನಲ್ಲಿ ನಡೆಯುತ್ತಿರುವ ಕೆಲ ಆಘಾತಕಾರಿ ಚಟುವಟಿಕೇಗಳು. ಎಲ್ಲರ ನಿದ್ದೆ ಗೆಡಸಿದೆ...

ಹೌದು ಕಳೆದ ತಿಂಗಳ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ವೇಳೆ, ಆಂಗ್ಲರು ಇಂತಹ ವಿಚಿತ್ರ ಘಟನೆಯಿಂದ ವಿಚಲಿತಗೊಂಡಿದ್ರು. ಹೊಟೇಲ್​ನಲ್ಲಿ ರಾತ್ರಿಯಾದ್ರೇ ಸಾಕು ರೂಮ್​ನಲ್ಲಿ ಬೇರೆಯಾರೋ ಇರುವ ಅನುಭವ ಎಲ್ಲ ಆಟಗಾರರಿಗಾಗಿದೆ. ಎಲ್ಲರಿಗೂ ಒಂದಿಲ್ಲೊಂದು ಕೆಟ್ಟ ಅನುಭವವಾಗಿದೆ.. ಹಾಗಾಗಿ ಲ್ಯಾಂಗ್​ಹ್ಯಾಮ್​ ಹೊಟೇಲ್​​ ಬದಲಿಸುವಂತೆ ಇಂಗ್ಲೆಂಡ್​ ಆಟಗಾರರು ಮನವಿ ಮಾಡಿಕೊಂಡಿದ್ದಾರೆ..

ಸ್ಟುವರ್ಟ್​ ಬ್ರಾಡ್​ ಹೇಳುವ ಪ್ರಕಾರ ರಾತ್ರೀ ವೇಳೆ ಇದ್ದಕ್ಕಿದಂತೆ ನಳ್ಳಿಯಲ್ಲಿ ನೀರು ಬಂದಂತೆ ಅನುಭವವಾಗುತ್ತಿತ್ತು.  ಆದರೆ ಲೈಟ್​ ಹಾಕಿದ ಕೂಡಲೇ ಯಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಲೈಟ್​ ಆಫ್​ ಮಾಡಿದ್ರೆ ಸಾಕೂ ಮತ್ತೇ ಆದೇ ಶಬ್ದ. ರೂಮ್​ನಲ್ಲಿ ಯಾರೋ ಓಡಾಡಿದ್ದಂತ ಅನುಭವ ಆಗುತ್ತಿತು. ರಾತ್ರಿ 1.30ರ ಸುಮಾರಿಗೆ ಎದ್ದು ಕುಳಿತರೆ ಏನು ಇಲ್ಲ. ಆದರೆ ಯಾರೋ ಸುತ್ತಾಡಿದ ಅನುಭವ ಆಗುತಿತ್ತು.  ಹಾಗಾಗಿ ರೂಮ್​ ಸಹ ಬದಲಿಸಿದೆ.  ಆದರೆ ಆ ವಿಚಿತ್ರ ಅನುಭವ ಮಾತ್ರ ನಿಲ್ಲಲಿಲ್ಲ... ಎಂತಾರೆ ಸ್ಟುವರ್ಟ್​ ಬ್ರಾಡ್​...

 ಆಂಗ್ಲ ಆಟಗಾರ ಬೆನ್​ ಸ್ಟೋಕ್ಸ್​ ಕೂಡ ಇಂತಹದೇ ಕೆಟ್ಟ ಅನುಭವಕ್ಕೆ ಒಳಗಾಗಿದ್ದಾರೆ. ವಿಶೇಷ ಎಂದರೆ ವಿಶ್ವದ ಅತ್ಯಂತ ಹಾಂಟೇಡ್​ ಹೊಟೇಲ್​ನಲ್ಲಿ ಅಗ್ರಸ್ಥಾನದಲ್ಲಿರುವದು ಲ್ಯಾಂಗ್​ಹ್ಯಾಮ್​ ಹೊಟೇಲ್​. ಇದು ಕೇವಲ ಭ್ರಮೆಯಲ್ಲ ಹಲವು ಸಾಹಿತಿಗಳು ತಮ್ಮ ಕಥೆ, ಕವನ, ಕಾದಂಬರಿಯಲ್ಲಿ ಇಲ್ಲಿ ದೆವ್ವ ಇರುವುದಾಗಿ ಹೇಳಿದ್ದಾರೆ. ಅನೇಕರು ಈ ಹೊಟೇಲ್​ನಲ್ಲಿ ವಾಸ್ತವ್ಯದ ನಂತರವೇ ತಮ್ಮ ಜೊತೆಯಾದ ವಿಚಿತ್ರ ಅನುಭವವನ್ನು ಪುಸ್ತಕದಲ್ಲಿ ಇಳಿಸಿದ್ದಾರೆ.. ಹಾಲಿವುಡ್​ ಸಿನಿಮಾದಲ್ಲೂ ಈ ಹೊಟೇಲ್​ ಬಳಸಿಕೊಳ್ಳಲಾಗಿದೆ. ಎಲ್ಲೇಡೆ ಹಾಂಟೇಡ್​ ಹೊಟೇಲ್​ ಎಂತಾನೇ ಪೇಮಸ್​ ಆಗಿರುವ ಈ ಹೊಟೇಲ್​ ಆಂಗ್ಲ ಆಟಗಾರರ ನಿದ್ದೆ ಗೆಡಿಸುವಲ್ಲು ಸಫಲವಾಗಿದೆ...

 ಇಷ್ಟೇ ಅಲ್ಲ ಈ ಹೊಟೇಲ್​ನಲ್ಲಿರುವ ರೂಮ್​ ನಂಬರ್ 333 ಅತ್ಯಂತ ಡೇಂಜರಸ್​. ಹಾಗಾಗಿ ಆ ರೂಮ್​ ಸದಾ ಮುಚ್ಚಿರುತ್ತೆ. ಈ ರೂಮ್​ನಲ್ಲಿ ವಾಸ್ತವ್ಯ ಮಾಡಿದವಱರು, ತಿರುಗಿಯು ಈ ಹೊಟೇಲ್​ ಹತ್ತಿರ ನೋಡಿಲ್ಲ. ಅಷ್ಟೋಂದು ಕರಾಳ ರಾತ್ರಿಗೆ ಈ ಹೊಟೇಲ್​ ಸಾಕ್ಷಿಯಾಗಿದೆ.. ಬಿಬಿಸಿ ರೇಡಿಯೊ ಉದ್ಘೋಷಕ ಜೇಮ್ಸ್​ ಅಲೇಕ್ಸಾಂಡರ್​ ಕೂಡ. 1973ರಲ್ಲಿ ಈ ಹೊಟೇಲ್​ನಲ್ಲಿ ಭೂತದ ಕಾಟಕ್ಕೆ ಬೆಚ್ಚಿ ಬೆರಗಾಗಿದ್ರು... ಸದ್ಯ ಇಂಗ್ಲೆಂಡ್​ ಆಟಗಾರರು ಈ ಲ್ಯಾಂಗ್​ಹ್ಯಾಮ್​ ಹೊಟೇಲ್​ನಿಂದ ಮುಕ್ತಿ ಕೊಡುವಂತೆ ಇಸಿಬಿಯನ್ನು ಕೋರಿಕೊಂಡಿದ್ದಾರೆ...

ಕಳೆದ ಎರಡು ತಿಂಗಳಿಂದ ಇಂಗ್ಲೆಂಡ್​ ಕಳಪೆ ಪ್ರದರ್ಶನಕ್ಕೆ ಈ ದೆವ್ವದ ಕಾಟ ಕಾರಣನಾ. ಭಯದಿಂದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರಾ, ಎಂಬುವುದು ತಿಳಿಯದಾಗಿದೆ. ಆಂಗ್ಲರು ತವರಿನಲ್ಲೇ ಲಂಕಾ  ವಿರುದ್ಧ ಸರಣಿ ಸೋತಿದ್ರು. ಭಾರತ ವಿರುದ್ಧವು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹೊಟೇಲ್​ ಬದಲಿಸಿದಾದ್ರು, ಆಂಗ್ಲರು ಪುಟಿದೇಳ್ತಾರಾ ಎಂದು ಇಂಗ್ಲೆಂಡ್​ ಕ್ರಿಕೆಟ್​ ಎಂಬ ಪ್ರಶ್ನೆ ಇಂಗ್ಲೆಡ್​​ ಕ್ರಿಕೆಟ್ ಬೋರ್ಡ್​ನ್ನು ಕಾಡುತ್ತಿದೆ...

ರವಿ.ಎಸ್​, 

ಶುಕ್ರವಾರ, ಜುಲೈ 18, 2014

ಆಲ್​ರೌಂಡರ್​ಗಳ ತಂಡ

ಭಾರತ ಕ್ರಿಕೆಟ್ ತಂಡದ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಟೀಮ್ ಇಂಡಿಯಾಗೆ ಇದುವರೆಗೂ ಸ್ಥಿರ ಪ್ರದರ್ಶನ ನೀಡುವ ಬೆಸ್ಟ್​ ಆಲ್​ರೌಂಡರ್​ ಸಿಕ್ಕಿರಲಿಲ್ಲ. ಅದ್ರಲ್ಲೂ ಫಾಸ್ಟ್​ ಬೌಲಿಂಗ್​ ಆಲ್​​ರೌಂಡರ್​​​​​ನ ಕೊರತೆಯನ್ನ ಭಾರತೀಯರು ಎದುರಿಸುತ್ತಿದ್ದರು. ಆದ್ರೆ ಈಗ ಭಾರತಕ್ಕೆ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನಾಲ್ವರು ಆಲ್​ರೌಂಡರ್ಸ್​ ಸಿಕ್ಕಿದ್ದಾರೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಎನ್ನುವಂತೆ ಪ್ರದರ್ಶನ ನೀಡ್ತಿದ್ದಾರೆ. ಅವರವರಲ್ಲೇ ಹೆಲ್ತಿ ಕಾಂಪಿಟೇಶನ್ ಸಹ ಶುರುವಾಗಿ ಬಿಟ್ಟಿದೆ.

ಕಳೆದೆರಡು ದಶಕದಿಂದ ಭಾರತದ ಪರ ಅಗ್ರ ಆರು ಬ್ಯಾಟ್ಸ್​​ಮನ್​ಗಳು ಔಟಾದ್ರೆ ಮುಗೀತು. ಐದಾರು ರನ್​ಗಳ ಅಂತರದಲ್ಲಿ ಉಳಿದ ನಾಲ್ಕು ವಿಕೆಟ್​ಗಳು ಬಿದ್ದು ಹೋಗುತ್ತಿದ್ವು. ಆದ್ರೆ ಕಳೆದೊಂದು ವರ್ಷದಿಂದ ಹಾಗೆ ಆಗ್ತಾಯಿಲ್ಲ. ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡುವ ಆಟಗಾರರು ನಮ್ಮಲ್ಲಿದ್ದಾರೆ. ಬಾಲಂಗೋಚಿಗಳು ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಕಳೆದೆರಡು ದಶಕಗಳಿಂದ ಭಾರತ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಕೊರತೆ ಎದುರಿಸುತ್ತಿತ್ತು. ಆದ್ರೆ ಈಗ 11ನೇ ಬ್ಯಾಟ್ಸ್​​ಮನ್ ಆಗಿ ಕಣಕ್ಕಿಳಿದು ರನ್ ಗಳಿಸುವ ಆಲ್​ರೌಂಡರ್​ ಇರುವುದು ಭಾರತದ ಶಕ್ತಿ ಹೆಚ್ಚಿಸಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಗಮನ ಸೆಳೆದಿದ್ದು ಬಾಲಂಗೋಚಿ ಬ್ಯಾಟ್ಸ್​​​ಮನ್​ಗಳು. ಅಂದ್ರೆ ಆಲ್​ರೌಂಡರ್ಸ್​ ಆಟ.

ಭುವನೇಶ್ವರ್ ಕುಮಾರ್​ ಇಂಗ್ಲೆಂಡ್​ ವಿರುದ್ಧ ಫಸ್ಟ್ ಟೆಸ್ಟ್​​ನ ಎರಡು ಇನ್ನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸೋ ಮೂಲಕ ಗಮನ ಸೆಳೆದ್ರು. ಒಬ್ಬ ಪರ್ಫೆಕ್ಟ್ ಫಾಸ್ಟ್​ ಬೌಲರ್​ ಕಮ್​ ಆಲ್​ರೌಂಡರ್​ ಹುಡುಕಾಟದಲ್ಲಿದ್ದ ಟೀಮ್​ ಇಂಡಿಯಾ ಆಸೆ ಕೊನೆಗೂ ಭುವಿ ಆಟದಿಂದ ನೆರವೇರಿತು. ಇಂಗ್ಲೆಂಡ್ ವಿರುದ್ಧ ಫಸ್ಟ್ ಇನ್ನಿಂಗ್ಸ್​ನಲ್ಲಿ ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದ ಭುವಿ, ಸೆಕೆಂಡ್ ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದ್ರು. ತಾನು ದೇಸಿ ಕ್ರಿಕೆಟ್​ನಲ್ಲಿ ಮಾತ್ರ ಆಲ್​ರೌಂಡರ್ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಸ್ಟ್ ಆಲ್​ರೌಂಡರ್​ ಅನ್ನೋದನ್ನ ಪ್ರೂವ್ ಮಾಡಿದ್ರು.

ದೇಸಿ ಕ್ರಿಕೆಟ್​​​ನಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿದ್ದ ಸ್ಟುವರ್ಟ್​ ಬಿನ್ನಿ, ಈಗ ಟೀಮ್ ಇಂಡಿಯಾ ಪರವಾಗಿಯೂ ಆಲ್ರೌಂಡ್​ ಆಟವಾಡುತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಇದ್ದ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಕೊರತೆಯನ್ನ ನೀಗಿಸುತ್ತಿದ್ದಾರೆ. ಮೊದಲೆರಡು ಏಕದಿನ ಪಂದ್ಯದಲ್ಲಿ ಅವರಿಗೆ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಅವರಾಡಿದ ಮೂರನೇ ಮ್ಯಾಚ್​​ನಲ್ಲೇ ಬಾಂಗ್ಲಾದೇಶ ವಿರುದ್ಧ 6 ವಿಕೆಟ್​ ಪಡೆಯೋ ಮೂಲಕ ದಾಖಲೆ ನಿರ್ಮಿಸಿದ್ರು. ಇನ್ನು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನ ಸತ್ವವಿಲ್ಲದ ಪಿಚ್​ನಲ್ಲಿ ವಿಕೆಟ್​ ಪಡೆಯಲಿಲ್ಲ. ಆದ್ರೆ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಆಕರ್ಷಕ 78 ರನ್ ಬಾರಿಸಿ ಟೆಸ್ಟ್​ ಡ್ರಾಗೊಳಿಸಿದ್ದು ಬಿನ್ನಿ ಬ್ಯಾಟಿಂಗ್. ಎರಡು ದಶಕಗಳ ಫಾಸ್ಟ್ ಬೌಲಿಂಗ್ ಕಮ್ ಆಲ್​ರೌಂಡರ್​ ಕೊರತೆಯನ್ನ ಭುವನೇಶ್ವರ್ ಮತ್ತು ಬಿನ್ನಿ ನೀಗಿಸಿದ್ದಾರೆ. ಇವರಿಬ್ಬರ ಆಲ್​ರೌಂಡ್ ಆಟ ಹೀಗೆ ಮುಂದುವರೆದ್ರೆ, ವಿದೇಶದಲ್ಲಿ ಭಾರತ ಸರಣಿ ಗೆಲ್ಲೋದ್ರಲ್ಲಿ ಅನುಮಾನವಿಲ್ಲ.

ರವೀಂದ್ರ ಜಡೇಜಾ ಸದ್ಯ ಟೀಮ್ ಇಂಡಿಯಾ ಪರ ಸ್ಥಿರವಾಗಿ ಆಲ್​ರೌಂಡ್​ ಪ್ರದರ್ಶನ ನೀಡುತ್ತಿರುವ ಏಕೈಕ ಆಟಗಾರ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಅವರ ಆಟ ಬೆಸ್ಟ್​. ಅದು ಟೆಸ್ಟ್​ ಆಗಿರ್ಲಿ, ಒನ್​ಡೇ ಆಗಿರ್ಲಿ, ಟಿ20 ಆಗಿರ್ಲಿ, ಎಲ್ಲಾ ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿಯೇ ಮೂರು ಮಾದರಿ ಕ್ರಿಕೆಟ್​ನಲ್ಲಿ ಅವರಿಗೆ ಖಾಯಂ ಸ್ಥಾನ. ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ರೂವಾರಿ.

ರವಿಚಂದ್ರನ್​ ಅಶ್ವಿನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು, ಒಬ್ಬ ತಜ್ಞ ಸ್ಪಿನ್ ಬೌಲರ್​ ಆಗಿ. ಆದ್ರೆ ಪಂದ್ಯದಿಂದ ಪಂದ್ಯಕ್ಕೆ ಅವರು ಪಕ್ವವಾಗುತ್ತಾ ಬಂದ್ರು. ಸ್ಪಿನ್ ಮ್ಯಾಜಿಕ್ ಜೊತೆ ಬ್ಯಾಟಿಂಗ್​​ನಲ್ಲೂ ತಮ್ಮ ಕೈಚಳಕ ತೋರಿಸಿದ್ರು. ಒನ್​ಡೇ-ಟಿ20ಯಲ್ಲಿ ರನ್ ಗಳಿಸಲು ಸ್ವಲ್ಪ ಪರದಾಡುತ್ತಿದ್ದಾರೆ. ಆದ್ರೆ ಟೆಸ್ಟ್​​ನಲ್ಲಿ ಮಾತ್ರ ಅಶ್ವಿನ್ ಆಲ್​ರೌಂಡ್​ ಆಟವನ್ನ ಪ್ರದರ್ಶಿಸುತ್ತಾ ಬಂದಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಸೆಂಚುರಿ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದರು. ಇದ್ರಲ್ಲೇ ಗೊತ್ತಾಗುತ್ತೆ ಅವರು ಬೆಸ್ಟ್​ ಆಲ್​ರೌಂಡರ್ ಅಂತ.

ಕಪಿಲ್​ ದೇವ್ ಹಾಗೂ ಮನೋಜ್​ ಪ್ರಭಾಕರ್​ ನಂತ್ರ ಬೆಸ್ಟ್ ಆಲ್​ರೌಂಡರ್​​​ಗಳು ಭಾರತಕ್ಕೆ ಸಿಕ್ಕಂತಾಗಿದೆ. ಈ ನಾಲ್ವರು ಆಲ್​ರೌಂಡರ್ಸ್, ಹೀಗೆ ಸ್ಥಿರ ಪ್ರದರ್ಶನ ನೀಡಿದಲ್ಲಿ ಟೀಮ್ ಇಂಡಿಯಾ ಟೆಸ್ಟ್​, ಒನ್​ಡೇ, ಟಿ20 ಕ್ರಿಕೆಟ್​ನಲ್ಲಿ ವಿಶ್ವದ ನಂಬರ್ ಒನ್ ತಂಡವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.

ರವಿ.ಎಸ್​

ಮಂಗಳವಾರ, ಜುಲೈ 15, 2014


ಬ್ರೆಜಿಲ್​ ಎಂದ ಕೂಡಲೇ ಥಟ್​ ಅಂತ ನೆನಪಾಗೋದು ಸಾಂಬಾ ಡ್ಯಾನ್ಸ್. ಬ್ರೆಜಿಲ್​ನ ಜಾನಪದ ನೃತ್ಯ ಪ್ರಕಾರದಲ್ಲೊಂದು ಸಾಂಬಾ ಡ್ಯಾನ್ಸ್. ಪ್ರತಿಯೊಂದು ಸಂಭ್ರಮ ಕ್ಷಣವನ್ನು ಬ್ರೆಜಿಲ್​ನರು ಆಚರಿಸುವುದೇ ಈ ಕುಣಿತದ ಮೂಲಕ. ಬ್ರೆಜಿಲ್​ ಎಂದರೆ ಸಾಂಬಾ ಡ್ಯಾನ್ಸ್​ ಎನ್ನುವಷ್ಟರ ಮಟ್ಟಿಗೆ ಈ ನೃತ್ಯ ಪ್ರಸಿದ್ಧಿ ಪಡೆದಿದೆ...

 ಫಿಫಾ ವಿಶ್ವಕಪ್​ ಬ್ರೆಜಿಲ್​ನಲ್ಲಿ ಇನ್ನೇನು ಕ್ಷಣಗಣನೇ ಆರಂಭವಾಗಿದೆ. ಬ್ರೆಜಿಲ್​ನಲ್ಲಿ ಜನರಿಗೆ ಏನ್​ ಇಷ್ಟಾವಾಗೋತ್ತು ಇಲ್ವೋ ಗೊತ್ತಿಲ್ಲ, ಆದರೆ ಸಾಂಬಾ ನೃತ್ಯ ಎಲ್ಲರಿಗೂ ಇಷ್ಟವಾಗುತ್ತೆ. ಕಳೆದ ಒಂದು ಶತಮಾನದಿಂದ ಬ್ರೆಜಿಲ್​ನ ಐಡೆಂಟಿಯಾಗಿ ಬೆಳೆದಿರುವ ಸಾಂಬಾ ಡ್ಯಾನ್ಸ್. ತನ್ನ ಈ ನೃತ್ಯ ಪ್ರಕಾರದಿಂದಲೇ ವಿಶ್ವದಲ್ಲಿ ತನ್ನದೆಯಾದ ಸ್ಥಾನಮಾನ ಹೊಂದಿದೆ...

 ಬ್ರೆಜಿಲಿಯನ್ನರಿಗೆ ಸಂತಸವಾದ್ರೇ ಸಾಕು ಅವರು ಸಾಂಬಾ ಡ್ಯಾನ್ಸ್ ಮೋರೆ ಹೋಗ್ತಾರೆ. ತಮ್ಮ ಮನಸ್ಸಿಗೆ ಬಂದಂತೆ ಕುಣಿಯುವ ಮೂಲಕ ಸಾಂಬಾ ನತ್ಯವನ್ನು ಎಂಜಾಯ್​ ಮಾಡ್ತಾರೆ. ಇದರಲ್ಲಿ ಹೀಗೆ ಡ್ಯಾನ್ಸ್​ ಮಾಡಬೇಕು ಎಂಬ ನಿಬಂಧನೆ ಏನು ಇಲ್ಲ. ಜಸ್ಟ್​ ಎರಡು ಕಾಲುಗಳನ್ನು ಹಿಂದೆ-ಮುಂದೆ ಲಯಬದ್ಧವಾಗಿ ಮೂವ್​ ಮಾಡಿದ್ರೆ ಸಾಕು ಸಾಂಬಾ ಡ್ಯಾನ್ಸ್ ಬಂತು ಎಂತಾನೇ ಲೆಕ್ಕ. ದೊಡ್ಡದಾಗಿ ಹೆಜ್ಜೆ ಹಾಕುವುದು, ಸಣ್ಣದಾಗಿ ಹೆಜ್ಜೆ ಹಾಕುವುದನ್ನು ಇಲ್ಲಿ ಕಾಣಬಹುದು... ಸಣ್ಣ ಹೆಜ್ಜೆ ಮುಂದೆ ಹಾಕಿದ್ರೆ, ಅದೇ ರೀತಿಯಲ್ಲಿ, ಅಷ್ಟೇ ಅಳತೆಯಲ್ಲಿ ಆ ಹೆಜ್ಜೆ ಹಿಂದಕ್ಕೆ ಹಾಕಬೇಕು. ಇಷ್ಟು ಮಾಡಿದ್ರೆ ಬೇಸಿಕ್​ ಸಾಂಬಾ ಡ್ಯಾನ್ಸ್ ಕಲಿತಂತೆ...
 ಬ್ರೆಜಿಲ್ ​ ದೇಶದ ಯಾವುದೇ ಡ್ಯಾನ್ಸ್ ಬಾರ್​ಗೆ ಹೋದ್ರು ಕಾಮನ್​ ಆಗಿ ಕಾಣಸಿಗುವುದು ಸಾಂಬಾ ನೃತ್ಯ. ಅವರದೆಯಾದ ಶೈಲಿಯಲ್ಲಿ ಈ ಡ್ಯಾನ್ಸ್​ಗೆ ವೆಸ್ಟರರ್ನ್​ ಟಚ್​ ನೀಡಿ ಡ್ಯಾನ್ಸ್​ ಬಾರ್​ಗಳಲ್ಲಿ ಕುಣಿಯಲಾಗುತ್ತದೆ. ವಿಶ್ವದ್ಯಂತ ಈ ನೃತ್ಯವನ್ನು ಕಲಿಸಲಾಗುತ್ತದೆ. ಅಷ್ಟೊಂದು ಫೇಮಸ್​ ಈ ಡ್ಯಾನ್ಸ್​...

ಈ ಡ್ಯಾನ್ಸ್​ನಲ್ಲೂ ನಾವು ವೃತ್ತಿಪರತೆಯನ್ನು ಕಾಣಬಹುದು. ಜೋಡಿಗಳು ಮಾಡುವಂತಹ ಡ್ಯಾನ್ಸ್​. ಏಕಾಂಗಿಯಾಗಿ ಮಾಡುವ ಡ್ಯಾನ್ಸ್ ಮತ್ತು ಗುಂಪಿನಲ್ಲಿ ಮಾಡುವ ನೃತ್ಯ. ಹೀಗೆ ಎಲ್ಲ ಪ್ರಕಾರದಲ್ಲು ಈ ನೃತ್ಯವನ್ನು ಕಾಣಬಹುದು ವಿಶೇಷ ಎಂದರೆ ಆಧುನಿಕ ಬೆಲ್ಲಿ ಡ್ಯಾನ್ಸ್​ ಸಹ ಇದರಲ್ಲಿ ಅಳವಡಿಸಿಕೊಂಡು ಬ್ರೆಜಿಲಿಯನ್ನರು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿಕೊಳ್ತಾರೆ...

 ಸಾಂಬಾ ನೃತ್ಯದಲ್ಲಿ ಐದು ಪ್ರಕಾರಗಳಿವೆ. ಇತ್ತೀಚೆಗೆ ಕೆಲ ಹೊಸ ಪ್ರಕಾರಗಳನ್ನು ಪರಿಚಯಿಸಲಾಗಿದೆ... ಮೂಲ ಸಾಂಬಾ ಡ್ಯಾನ್ಸ್ ನೋಡಿದರೆ ದೊಂಬರಾಟ ನೋಡಿದಂತೆ ಬಾಸವಾಗುತ್ತದೆ. ದೊಂಬರಾಟದಲ್ಲಿ ಕಾಣುವಂತಹ ಹಲವು ಚಲನವಲನಗಳನ್ನು ಈ ಮೂಲ ನೃತ್ಯದಲ್ಲಿ ಕಾಣಬಹುದು. ಇಲ್ಲಿ ಡ್ಯಾನ್ಸ್ ಮಾಡುವವರು ತೊಡುವ ಉಡುಪು ಕೂಡ ತುಂಬಾ ವಿಭಿನ್ನ, ವಿಚಿತ್ರವಾಗಿರುತ್ತೆ. ಹಾಗಾಗಿಯೇ ಸಾಂಬಾ ಡ್ಯಾನ್ಸ್​ ವಿಶ್ವದ ಎಲ್ಲ ನೃತ್ಯಗಳಿಗಿಂತ ವಿಭಿನ್ನವಾಗಿ ಕಾಣುವುದು...

ಸಾಂಬಾ ಡ್ಯಾನ್ಸ್​ನ ಮೊದಲ ಪ್ರಕಾರ ಸಾಂಬಾ ಪಗೊಡೆ. ಈ ನೃತ್ಯ ಹೆಚ್ಚು ಸುಧಾರಿತ ಮತ್ತು ನೈಜ ನೃತ್ಯವಾಗಿದೆ. ಇದರಲ್ಲಿ ಮೂಲ ಸಾಂಬಾ ಡ್ಯಾನ್ಸ್​ನಲ್ಲಿರುವಂತಹ ದೊಂಬರಾಟದಂತಹ ಚಲವಲನಗಳು ಕಮ್ಮಿ. ಜೋಡಿಗಳು ಕೂಡಿ ಮಾಡುವಂತಹ ವಿಶಿಷ್ಟ ನೃತ್ಯವನ್ನು ‘ಸಾಂಬಾ ಪಗೊಡೆ’ ಎಂದು ಕರೆಯುತ್ತಾರೆ..

ಸಾಂಬಾ ಆಕ್ಸ್ ಎಂಬುದು ಮತ್ತೊಂದು ರೀತಿಯ ನೃತ್ಯ ಪ್ರಕಾರ. ಇದು ಹೆಚ್ಚಾಗಿ ಉತ್ತಮ ಫಿಟ್ನೆಸ್​ಗಾಗಿ ಈ ಡ್ಯಾನ್ಸ್​ನ್ನು ಮಾಡಲಾಗುತ್ತೆ. ಏರೋಬಿಕ್ಸ್​ನ ಕೆಲ ಝಲಕ್​ಗಳು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಈ ಡ್ಯಾನ್ಸ್ ಮಾಡಲಾಗುತ್ತೆ. ಇದರ ವಿಶೇಷತೆಯೆಂದರೆ ಆಯಾ ಹಾಡಿನ ಲಯಕ್ಕೆ ತಕ್ಕಂತೆ ಇಲ್ಲಿ ಸ್ಟೇಪ್ಸ್ ಹಾಕಲಾಗುತ್ತೆ. ವೇಗವಾಗಿ ಹೆಜ್ಜೆಗಳನ್ನು ಹಾಕುವುದು ಈ ನೃತ್ಯದ ವಿಶೇಷತೆಯಾಗಿದ್ದು, ಕಳೆದ 20 ವರ್ಷದಿಂದ ಇದು ಹೆಚ್ಚು ಬಳಕೆಗೆ ಬಂದಿರುವ ನೃತ್ಯ ಪ್ರಕಾರವಾಗಿದೆ....

 ಸಾಂಬಾ ಡ್ಯಾನ್ಸ್​ನ ಅತ್ಯಂತ ಜನಪ್ರಿಯ ಎರಡನೇ ಪ್ರಕಾರ ‘ಸಾಂಬಾ ರೆಗಾಯೆ’. ಇದು ಮೂಲ ನೃತ್ಯದ ಹಲವು ಅಂಶಗಳನ್ನು ಒಳಗೊಂಡಿದೆ. ಗುಂಪಿನಲ್ಲಿ ಈ ನೃತ್ಯವನ್ನು ಮಾಡಲಾಗುತ್ತದೆ. ಇದೊಂದು ಮನಮೋಹಕ ಗ್ರೂಪ್​ ಡ್ಯಾನ್ಸ್​. ಇದರ ವಿಶೇಷತೆಯೆಂದರೆ ತಮಟೆ, ಡ್ರಮ್​ ಮತ್ತು ತಬಲ ಬಳಕೆ ಈ ನೃತ್ಯದಲ್ಲಿ ಕಡ್ಡಾಯವಾಗಿರುತ್ತದೆ., ಸಾಮಾನ್ಯವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಗ್ರೂಪ್​ ಡ್ಯಾನ್ಸ್​ನಂತೆ ಇದನ್ನು ಕಾಣಬಹುದಾಗಿದೆ...

 ‘ಸಾಂಬಾ ರಾಕ್​ ಡ್ಯಾನ್ಸ್’ ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೃತ್ಯ ಪ್ರಕಾರವಾಗಿದೆ. ಅಧುನಿಕ ಸಂಗೀತಕ್ಕೆ ಸ್ಟೆಪ್​​ ಹಾಕುವುದು ಈ ನೃತ್ಯದ ವಿಶೆಷ.  ಎಲ್ಲ ರೀತಿಯ ಹೊಸ-ಹೊಸ ನೃತ್ಯಗಳನ್ನು ಇಲ್ಲಿ ಆಳವಡಿಸಿಕೊಳ್ಳಲಾಗುತ್ತದೆ. ಬೆಲ್ಲಿ, ಸಾಲ್ಸಾ, ಡಿಸ್ಕೋ ಡ್ಯಾನ್ಸ್​ ಕೂಡ ಇದರ ಒಂದು ಭಾಗವಾಗಿವೆ. ಸಂಗೀತ ಕೂಡ ಅಷ್ಟೇ ಆಧುನಿಕವಾಗಿರುತ್ತೆ. ಹೆಚ್ಚಾಗಿ ಈ ಸಾಂಬಾ ರಾಕ್​ ಡ್ಯಾನ್ಸ್​ನ್ನು, ನೈಟ್​ ಕ್ಲಬ್​, ಡ್ಯಾನ್ಸ್​ ಬಾರ್​ಗಳಲ್ಲಿ ಕಾಣಬಹುದು...

ಸಾಂಬಾ ಡ್ಯಾನ್ಸ್​ನ ಮೂಲ  ಸಾಂಬಾ ಡೆ ರೋಡ. ಇದು ಆಫ್ರೋ-ಬ್ರೆಜಿಲಿಯನ್​ ಶೈಲಿಯ ನೃತ್ಯ. ಹೆಚ್ಚಾಗಿ ಇದನ್ನು  ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಮಾಡ್ತಾರೆ. ನೋಡುಗರಿಗೆ ಇವರ ಉಡುಪು ವಿಚಿತ್ರವಾಗಿ ಕಂಡರು ಇದೇ ಸಾಂಬಾ ಡ್ಯಾನ್ಸ್​ನ ಮೂಲ ಎಂದು ಹೇಳಬಹುದು. ರಸ್ತೆಯ ಮಧ್ಯೆ ಜಾತ್ರೆಯಂತೆ ಸೇರುವ ಜನರು ಈ ಡ್ಯಾನ್ಸ್ ಮಾಡ್ತಾರೆ. ಪಾರಂಪರಿಕ ಬಟ್ಟೆ ದೊಂಬರಾಟದಂತಹ ಚಲನವಲನಗಳು ಈ ಡ್ಯಾನ್ಸ್​ನ ಹೈಲೆಟ್ಸ್​ ಆಗಿರುತ್ತವೆ...

ಇಷ್ಟೇ ಅಲ್ಲ ಬಾಲಿವುಡ್​ನವರು ಸಾಂಬಾ ನೃತ್ಯಕ್ಕೆ ಫಿದಾ ಆಗಿದ್ದಾರೆ. ಧೂಮ್​-2 ಚಿತ್ರದ ಒಂದು ಹಾಡನ್ನು ಬ್ರೆಜಿಲ್​ನಲ್ಲಿ ಚಿತ್ರಿಕರಿಸಲಾಯ್ತು. ಈ ಹಾಡಲ್ಲಿ ಸಾಂಬಾ ನೃತ್ಯ ವಿಶೇಷವಾಗಿ ಗಮನ ಸೆಳೆಯಿತು. ಈ ಹಾಡು ಕೂಡ ತೆರೆ ಮೇಲೆ ಅಷ್ಟೇ ಅದ್ಭುತವಾಗಿ ಮೂಡಿಬಂತು...

ಸಾಂಬಾ ನೃತ್ಯದಿಂದ ಧೂಮ್​-2 ಚಿತ್ರ ಕ್ಲಿಕ್​ ಆಗಿದ್ದೆ ಬಂತು,  ‘ಜಿಂದಾಗಿ ನಾ ಮಿಲೇಗಿ ದೊಬಾರ‘ ಚಿತ್ರದ ಒಂದು ಹಾಡಲ್ಲಿ ಸಾಂಬಾ ನೃತ್ಯ ಬಳಸಲಾಯ್ತು, ಸೆನೊರೀಟಾ ಎಂಬ ಈ ಹಾಡು ತನ್ನ ವಿಶೇಷವಾದ ಡ್ಯಾನ್ಸ್​ನಿಂದಲೇ ಧೂಳ್ಳೆಬ್ಬಿಸಿತು...

 ಫಿಫಾ ವಿಶ್ವಕಪ್​ನಿಂದಾಗಿ ಸಾಂಬಾ ಡ್ಯಾನ್ಸ್ ಮತ್ತಷ್ಟೂ ಫೇಮಸ್​ ಆಗಲಿದೆ. ವಿಶ್ವಾದ್ಯಂತ ಸಾಂಬಾ ಸೊಗಸು ಪಸರಿಸುವಲ್ಲಿ ಈ ಫುಟ್ಬಾಲ್​ ವಿಶ್ವಕಪ್​ ಯಶಸ್ವಿಯಾಗಲಿದೆ. ಫುಟ್ಬಾಲ್​ನಿಂದಾಗಿ ಅನೇಕರು ಸಾಂಬಾ ಸೊಗಸು ಕಣ್ತುಂಬಿಕೊಳ್ಳುವ ಭಾಗ್ಯ ಪಡೆದುಕೊಳ್ಳಲ್ಲಿದ್ದಾರೆ..

ರವಿ.ಎಸ್​

ಮಂಗಳವಾರ, ಅಕ್ಟೋಬರ್ 19, 2010

ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ

ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ