ಮಂಗಳವಾರ, ಜುಲೈ 15, 2014


ಬ್ರೆಜಿಲ್​ ಎಂದ ಕೂಡಲೇ ಥಟ್​ ಅಂತ ನೆನಪಾಗೋದು ಸಾಂಬಾ ಡ್ಯಾನ್ಸ್. ಬ್ರೆಜಿಲ್​ನ ಜಾನಪದ ನೃತ್ಯ ಪ್ರಕಾರದಲ್ಲೊಂದು ಸಾಂಬಾ ಡ್ಯಾನ್ಸ್. ಪ್ರತಿಯೊಂದು ಸಂಭ್ರಮ ಕ್ಷಣವನ್ನು ಬ್ರೆಜಿಲ್​ನರು ಆಚರಿಸುವುದೇ ಈ ಕುಣಿತದ ಮೂಲಕ. ಬ್ರೆಜಿಲ್​ ಎಂದರೆ ಸಾಂಬಾ ಡ್ಯಾನ್ಸ್​ ಎನ್ನುವಷ್ಟರ ಮಟ್ಟಿಗೆ ಈ ನೃತ್ಯ ಪ್ರಸಿದ್ಧಿ ಪಡೆದಿದೆ...

 ಫಿಫಾ ವಿಶ್ವಕಪ್​ ಬ್ರೆಜಿಲ್​ನಲ್ಲಿ ಇನ್ನೇನು ಕ್ಷಣಗಣನೇ ಆರಂಭವಾಗಿದೆ. ಬ್ರೆಜಿಲ್​ನಲ್ಲಿ ಜನರಿಗೆ ಏನ್​ ಇಷ್ಟಾವಾಗೋತ್ತು ಇಲ್ವೋ ಗೊತ್ತಿಲ್ಲ, ಆದರೆ ಸಾಂಬಾ ನೃತ್ಯ ಎಲ್ಲರಿಗೂ ಇಷ್ಟವಾಗುತ್ತೆ. ಕಳೆದ ಒಂದು ಶತಮಾನದಿಂದ ಬ್ರೆಜಿಲ್​ನ ಐಡೆಂಟಿಯಾಗಿ ಬೆಳೆದಿರುವ ಸಾಂಬಾ ಡ್ಯಾನ್ಸ್. ತನ್ನ ಈ ನೃತ್ಯ ಪ್ರಕಾರದಿಂದಲೇ ವಿಶ್ವದಲ್ಲಿ ತನ್ನದೆಯಾದ ಸ್ಥಾನಮಾನ ಹೊಂದಿದೆ...

 ಬ್ರೆಜಿಲಿಯನ್ನರಿಗೆ ಸಂತಸವಾದ್ರೇ ಸಾಕು ಅವರು ಸಾಂಬಾ ಡ್ಯಾನ್ಸ್ ಮೋರೆ ಹೋಗ್ತಾರೆ. ತಮ್ಮ ಮನಸ್ಸಿಗೆ ಬಂದಂತೆ ಕುಣಿಯುವ ಮೂಲಕ ಸಾಂಬಾ ನತ್ಯವನ್ನು ಎಂಜಾಯ್​ ಮಾಡ್ತಾರೆ. ಇದರಲ್ಲಿ ಹೀಗೆ ಡ್ಯಾನ್ಸ್​ ಮಾಡಬೇಕು ಎಂಬ ನಿಬಂಧನೆ ಏನು ಇಲ್ಲ. ಜಸ್ಟ್​ ಎರಡು ಕಾಲುಗಳನ್ನು ಹಿಂದೆ-ಮುಂದೆ ಲಯಬದ್ಧವಾಗಿ ಮೂವ್​ ಮಾಡಿದ್ರೆ ಸಾಕು ಸಾಂಬಾ ಡ್ಯಾನ್ಸ್ ಬಂತು ಎಂತಾನೇ ಲೆಕ್ಕ. ದೊಡ್ಡದಾಗಿ ಹೆಜ್ಜೆ ಹಾಕುವುದು, ಸಣ್ಣದಾಗಿ ಹೆಜ್ಜೆ ಹಾಕುವುದನ್ನು ಇಲ್ಲಿ ಕಾಣಬಹುದು... ಸಣ್ಣ ಹೆಜ್ಜೆ ಮುಂದೆ ಹಾಕಿದ್ರೆ, ಅದೇ ರೀತಿಯಲ್ಲಿ, ಅಷ್ಟೇ ಅಳತೆಯಲ್ಲಿ ಆ ಹೆಜ್ಜೆ ಹಿಂದಕ್ಕೆ ಹಾಕಬೇಕು. ಇಷ್ಟು ಮಾಡಿದ್ರೆ ಬೇಸಿಕ್​ ಸಾಂಬಾ ಡ್ಯಾನ್ಸ್ ಕಲಿತಂತೆ...
 ಬ್ರೆಜಿಲ್ ​ ದೇಶದ ಯಾವುದೇ ಡ್ಯಾನ್ಸ್ ಬಾರ್​ಗೆ ಹೋದ್ರು ಕಾಮನ್​ ಆಗಿ ಕಾಣಸಿಗುವುದು ಸಾಂಬಾ ನೃತ್ಯ. ಅವರದೆಯಾದ ಶೈಲಿಯಲ್ಲಿ ಈ ಡ್ಯಾನ್ಸ್​ಗೆ ವೆಸ್ಟರರ್ನ್​ ಟಚ್​ ನೀಡಿ ಡ್ಯಾನ್ಸ್​ ಬಾರ್​ಗಳಲ್ಲಿ ಕುಣಿಯಲಾಗುತ್ತದೆ. ವಿಶ್ವದ್ಯಂತ ಈ ನೃತ್ಯವನ್ನು ಕಲಿಸಲಾಗುತ್ತದೆ. ಅಷ್ಟೊಂದು ಫೇಮಸ್​ ಈ ಡ್ಯಾನ್ಸ್​...

ಈ ಡ್ಯಾನ್ಸ್​ನಲ್ಲೂ ನಾವು ವೃತ್ತಿಪರತೆಯನ್ನು ಕಾಣಬಹುದು. ಜೋಡಿಗಳು ಮಾಡುವಂತಹ ಡ್ಯಾನ್ಸ್​. ಏಕಾಂಗಿಯಾಗಿ ಮಾಡುವ ಡ್ಯಾನ್ಸ್ ಮತ್ತು ಗುಂಪಿನಲ್ಲಿ ಮಾಡುವ ನೃತ್ಯ. ಹೀಗೆ ಎಲ್ಲ ಪ್ರಕಾರದಲ್ಲು ಈ ನೃತ್ಯವನ್ನು ಕಾಣಬಹುದು ವಿಶೇಷ ಎಂದರೆ ಆಧುನಿಕ ಬೆಲ್ಲಿ ಡ್ಯಾನ್ಸ್​ ಸಹ ಇದರಲ್ಲಿ ಅಳವಡಿಸಿಕೊಂಡು ಬ್ರೆಜಿಲಿಯನ್ನರು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿಕೊಳ್ತಾರೆ...

 ಸಾಂಬಾ ನೃತ್ಯದಲ್ಲಿ ಐದು ಪ್ರಕಾರಗಳಿವೆ. ಇತ್ತೀಚೆಗೆ ಕೆಲ ಹೊಸ ಪ್ರಕಾರಗಳನ್ನು ಪರಿಚಯಿಸಲಾಗಿದೆ... ಮೂಲ ಸಾಂಬಾ ಡ್ಯಾನ್ಸ್ ನೋಡಿದರೆ ದೊಂಬರಾಟ ನೋಡಿದಂತೆ ಬಾಸವಾಗುತ್ತದೆ. ದೊಂಬರಾಟದಲ್ಲಿ ಕಾಣುವಂತಹ ಹಲವು ಚಲನವಲನಗಳನ್ನು ಈ ಮೂಲ ನೃತ್ಯದಲ್ಲಿ ಕಾಣಬಹುದು. ಇಲ್ಲಿ ಡ್ಯಾನ್ಸ್ ಮಾಡುವವರು ತೊಡುವ ಉಡುಪು ಕೂಡ ತುಂಬಾ ವಿಭಿನ್ನ, ವಿಚಿತ್ರವಾಗಿರುತ್ತೆ. ಹಾಗಾಗಿಯೇ ಸಾಂಬಾ ಡ್ಯಾನ್ಸ್​ ವಿಶ್ವದ ಎಲ್ಲ ನೃತ್ಯಗಳಿಗಿಂತ ವಿಭಿನ್ನವಾಗಿ ಕಾಣುವುದು...

ಸಾಂಬಾ ಡ್ಯಾನ್ಸ್​ನ ಮೊದಲ ಪ್ರಕಾರ ಸಾಂಬಾ ಪಗೊಡೆ. ಈ ನೃತ್ಯ ಹೆಚ್ಚು ಸುಧಾರಿತ ಮತ್ತು ನೈಜ ನೃತ್ಯವಾಗಿದೆ. ಇದರಲ್ಲಿ ಮೂಲ ಸಾಂಬಾ ಡ್ಯಾನ್ಸ್​ನಲ್ಲಿರುವಂತಹ ದೊಂಬರಾಟದಂತಹ ಚಲವಲನಗಳು ಕಮ್ಮಿ. ಜೋಡಿಗಳು ಕೂಡಿ ಮಾಡುವಂತಹ ವಿಶಿಷ್ಟ ನೃತ್ಯವನ್ನು ‘ಸಾಂಬಾ ಪಗೊಡೆ’ ಎಂದು ಕರೆಯುತ್ತಾರೆ..

ಸಾಂಬಾ ಆಕ್ಸ್ ಎಂಬುದು ಮತ್ತೊಂದು ರೀತಿಯ ನೃತ್ಯ ಪ್ರಕಾರ. ಇದು ಹೆಚ್ಚಾಗಿ ಉತ್ತಮ ಫಿಟ್ನೆಸ್​ಗಾಗಿ ಈ ಡ್ಯಾನ್ಸ್​ನ್ನು ಮಾಡಲಾಗುತ್ತೆ. ಏರೋಬಿಕ್ಸ್​ನ ಕೆಲ ಝಲಕ್​ಗಳು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಈ ಡ್ಯಾನ್ಸ್ ಮಾಡಲಾಗುತ್ತೆ. ಇದರ ವಿಶೇಷತೆಯೆಂದರೆ ಆಯಾ ಹಾಡಿನ ಲಯಕ್ಕೆ ತಕ್ಕಂತೆ ಇಲ್ಲಿ ಸ್ಟೇಪ್ಸ್ ಹಾಕಲಾಗುತ್ತೆ. ವೇಗವಾಗಿ ಹೆಜ್ಜೆಗಳನ್ನು ಹಾಕುವುದು ಈ ನೃತ್ಯದ ವಿಶೇಷತೆಯಾಗಿದ್ದು, ಕಳೆದ 20 ವರ್ಷದಿಂದ ಇದು ಹೆಚ್ಚು ಬಳಕೆಗೆ ಬಂದಿರುವ ನೃತ್ಯ ಪ್ರಕಾರವಾಗಿದೆ....

 ಸಾಂಬಾ ಡ್ಯಾನ್ಸ್​ನ ಅತ್ಯಂತ ಜನಪ್ರಿಯ ಎರಡನೇ ಪ್ರಕಾರ ‘ಸಾಂಬಾ ರೆಗಾಯೆ’. ಇದು ಮೂಲ ನೃತ್ಯದ ಹಲವು ಅಂಶಗಳನ್ನು ಒಳಗೊಂಡಿದೆ. ಗುಂಪಿನಲ್ಲಿ ಈ ನೃತ್ಯವನ್ನು ಮಾಡಲಾಗುತ್ತದೆ. ಇದೊಂದು ಮನಮೋಹಕ ಗ್ರೂಪ್​ ಡ್ಯಾನ್ಸ್​. ಇದರ ವಿಶೇಷತೆಯೆಂದರೆ ತಮಟೆ, ಡ್ರಮ್​ ಮತ್ತು ತಬಲ ಬಳಕೆ ಈ ನೃತ್ಯದಲ್ಲಿ ಕಡ್ಡಾಯವಾಗಿರುತ್ತದೆ., ಸಾಮಾನ್ಯವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಗ್ರೂಪ್​ ಡ್ಯಾನ್ಸ್​ನಂತೆ ಇದನ್ನು ಕಾಣಬಹುದಾಗಿದೆ...

 ‘ಸಾಂಬಾ ರಾಕ್​ ಡ್ಯಾನ್ಸ್’ ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೃತ್ಯ ಪ್ರಕಾರವಾಗಿದೆ. ಅಧುನಿಕ ಸಂಗೀತಕ್ಕೆ ಸ್ಟೆಪ್​​ ಹಾಕುವುದು ಈ ನೃತ್ಯದ ವಿಶೆಷ.  ಎಲ್ಲ ರೀತಿಯ ಹೊಸ-ಹೊಸ ನೃತ್ಯಗಳನ್ನು ಇಲ್ಲಿ ಆಳವಡಿಸಿಕೊಳ್ಳಲಾಗುತ್ತದೆ. ಬೆಲ್ಲಿ, ಸಾಲ್ಸಾ, ಡಿಸ್ಕೋ ಡ್ಯಾನ್ಸ್​ ಕೂಡ ಇದರ ಒಂದು ಭಾಗವಾಗಿವೆ. ಸಂಗೀತ ಕೂಡ ಅಷ್ಟೇ ಆಧುನಿಕವಾಗಿರುತ್ತೆ. ಹೆಚ್ಚಾಗಿ ಈ ಸಾಂಬಾ ರಾಕ್​ ಡ್ಯಾನ್ಸ್​ನ್ನು, ನೈಟ್​ ಕ್ಲಬ್​, ಡ್ಯಾನ್ಸ್​ ಬಾರ್​ಗಳಲ್ಲಿ ಕಾಣಬಹುದು...

ಸಾಂಬಾ ಡ್ಯಾನ್ಸ್​ನ ಮೂಲ  ಸಾಂಬಾ ಡೆ ರೋಡ. ಇದು ಆಫ್ರೋ-ಬ್ರೆಜಿಲಿಯನ್​ ಶೈಲಿಯ ನೃತ್ಯ. ಹೆಚ್ಚಾಗಿ ಇದನ್ನು  ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಮಾಡ್ತಾರೆ. ನೋಡುಗರಿಗೆ ಇವರ ಉಡುಪು ವಿಚಿತ್ರವಾಗಿ ಕಂಡರು ಇದೇ ಸಾಂಬಾ ಡ್ಯಾನ್ಸ್​ನ ಮೂಲ ಎಂದು ಹೇಳಬಹುದು. ರಸ್ತೆಯ ಮಧ್ಯೆ ಜಾತ್ರೆಯಂತೆ ಸೇರುವ ಜನರು ಈ ಡ್ಯಾನ್ಸ್ ಮಾಡ್ತಾರೆ. ಪಾರಂಪರಿಕ ಬಟ್ಟೆ ದೊಂಬರಾಟದಂತಹ ಚಲನವಲನಗಳು ಈ ಡ್ಯಾನ್ಸ್​ನ ಹೈಲೆಟ್ಸ್​ ಆಗಿರುತ್ತವೆ...

ಇಷ್ಟೇ ಅಲ್ಲ ಬಾಲಿವುಡ್​ನವರು ಸಾಂಬಾ ನೃತ್ಯಕ್ಕೆ ಫಿದಾ ಆಗಿದ್ದಾರೆ. ಧೂಮ್​-2 ಚಿತ್ರದ ಒಂದು ಹಾಡನ್ನು ಬ್ರೆಜಿಲ್​ನಲ್ಲಿ ಚಿತ್ರಿಕರಿಸಲಾಯ್ತು. ಈ ಹಾಡಲ್ಲಿ ಸಾಂಬಾ ನೃತ್ಯ ವಿಶೇಷವಾಗಿ ಗಮನ ಸೆಳೆಯಿತು. ಈ ಹಾಡು ಕೂಡ ತೆರೆ ಮೇಲೆ ಅಷ್ಟೇ ಅದ್ಭುತವಾಗಿ ಮೂಡಿಬಂತು...

ಸಾಂಬಾ ನೃತ್ಯದಿಂದ ಧೂಮ್​-2 ಚಿತ್ರ ಕ್ಲಿಕ್​ ಆಗಿದ್ದೆ ಬಂತು,  ‘ಜಿಂದಾಗಿ ನಾ ಮಿಲೇಗಿ ದೊಬಾರ‘ ಚಿತ್ರದ ಒಂದು ಹಾಡಲ್ಲಿ ಸಾಂಬಾ ನೃತ್ಯ ಬಳಸಲಾಯ್ತು, ಸೆನೊರೀಟಾ ಎಂಬ ಈ ಹಾಡು ತನ್ನ ವಿಶೇಷವಾದ ಡ್ಯಾನ್ಸ್​ನಿಂದಲೇ ಧೂಳ್ಳೆಬ್ಬಿಸಿತು...

 ಫಿಫಾ ವಿಶ್ವಕಪ್​ನಿಂದಾಗಿ ಸಾಂಬಾ ಡ್ಯಾನ್ಸ್ ಮತ್ತಷ್ಟೂ ಫೇಮಸ್​ ಆಗಲಿದೆ. ವಿಶ್ವಾದ್ಯಂತ ಸಾಂಬಾ ಸೊಗಸು ಪಸರಿಸುವಲ್ಲಿ ಈ ಫುಟ್ಬಾಲ್​ ವಿಶ್ವಕಪ್​ ಯಶಸ್ವಿಯಾಗಲಿದೆ. ಫುಟ್ಬಾಲ್​ನಿಂದಾಗಿ ಅನೇಕರು ಸಾಂಬಾ ಸೊಗಸು ಕಣ್ತುಂಬಿಕೊಳ್ಳುವ ಭಾಗ್ಯ ಪಡೆದುಕೊಳ್ಳಲ್ಲಿದ್ದಾರೆ..

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ